Subscribe to Boldsky
By : Boldsky Video Team
Published : February 13, 2018, 07:36

ಶಿವರಾತ್ರಿಯಂದು ಜಾಗರಣೆಉಪವಾಸ ಕೈಗೊಂಡರೆ ಇಷ್ಟಾರ್ಥಗಳು ನೆರವೇರುವುದು | Boldsky

ಭಾರತೀಯ ಸಂಸ್ಕೃತಿಯು ತನ್ನ ಅನನ್ಯತೆಗೆ ಹೆಸರುವಾಸಿಯಾಗಿದ್ದು ಇಲ್ಲಿ ಆಚರಿಸುವ ಹಬ್ಬ ಕೂಡ ವಿಶಿಷ್ಟ ಮತ್ತು ಅನನ್ಯವಾಗಿದೆ. ತೀರಾ ಹತ್ತಿರದಲ್ಲಿಯೇ ಇರುವ ಶಿವರಾತ್ರಿಯಾಗಿದ್ದು ಈ ಹಬ್ಬಕ್ಕೆ ಇನ್ನೇನು ಬೆರಳಣಿಕೆ ದಿನಗಳು ಮಾತ್ರ ಉಳಿದಿವೆ, ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ.
ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಈ ಉಪವಾಸವು ಮಾನವನಲ್ಲಿ ರಜ ಮತ್ತು ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ಆರೋಗ್ಯದೊಂದಿಗೆ ರಜ ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡುವ ವಿಶೇಷ ಸಿದ್ಧಿ ಶಿವರಾತ್ರಿ ವ್ರತಾ ಆಚರಣೆಯಿಂದ ಲಭ್ಯ.... ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ...
 

Get breaking news alerts from Boldsky